ದೇವಸ್ಥಾನ ಹಾಗೂ ಮಠದ ಭೂಮಿಯ ಪೂರ್ವ ಇತಿಹಾಸ
ಅನೇಕ ದಶಕಗಳ ಹಿಂದೆ ಪಲ್ಲಕ್ಕಿ ಮನೆತನದ ಪೂರ್ವಿಕರಾದ ರಾಘವೇಂದ್ರ ತೀರ್ಥ ಶ್ರೀಪಾದಂಗಳವರ ಸಮಕಾಲಿನವರಾದ ಷಡಂಗ್ರಿ ಕೃಷ್ಣಾಚಾರ್ಯರ ಪಾಂಡಿತ್ಯವನ್ನು ಕಂಡು ಸುಪ್ರಸನ್ನರಾಗಿ “ಪಲ್ಲಕ್ಕಿ” ಎಂಬ ಬಿರುದು ನೀಡಿ, “ಪಲ್ಲಕ್ಕಿ ವಂಶ ನಾಮವನ್ನು” ಅಪಸ್ತಂಬ ಯಜುರ್ವೇದಿಯ ಕುತ್ಸು ಗೋತ್ರದಲ್ಲಿ ಹುಟ್ಟಿದ ಪಂಡಗ ಕೃಷ್ಣಚಾರ್ಯರಿಂದ ನಮ್ಮ ಕುಲಕ್ಕೆ “ಪಲ್ಲಕ್ಕಿ” ಎಂಬ ಕುಲನಾಮವು ಬಂದಿತು.
ಕೂಡ್ಲಿ ಆರ್ಯ ಅಕ್ಷೋಭ್ಯ ಮಠದ ಶ್ರೀ 1008 ಶ್ರೀ ರಘುವರ್ಯ ತೀರ್ಥರು “ಪಲ್ಲಕ್ಕಿ” ಕುಲದ ಪೂರ್ವಜರು ಎಂಬ ಹೆಮ್ಮೆ ನಮ್ಮ ಎಲ್ಲರಿಗೂ ಇದೆ. ಹೀಗಾಗಿ ಕೂಡ್ಲಿ ಮಠವು ನಮ್ಮ ಪೂರ್ವಜರಿಗೆ ಯಾವಾಗಲೂ ಅನುಗ್ರಹ ಮಾಡುತ್ತಿದೆ.
ಪ್ರಕೃತ ವಿದೃಮಾನ ಪೀಠಾಧೀಶರಾದ ಶ್ರೀ ರಘು ವಿಜಯ ತೀರ್ಥರು ನಮ್ಮ ಕುಲದವರಿಗೆ ವಿಶೇಷವಾಗಿ ಅನುಗ್ರಹಿಸುತ್ತಾರೆ, ಇದು ಅತ್ಯಂತ ಸಂತೋಷದ ಸಂಗತಿ ಆಗಿದೆ.
ಪ್ರಕೃತ ಈ ಸ್ಥಳವನ್ನು ಪಲ್ಲಕ್ಕಿ ಮನೆತನದ ಶ್ರೀಮತಿ ಸೇತೂಬಾಯಿ ಹಾಗೂ ಶ್ರೀ ನರಸಿಂಹಾಚಾರ್ ಇವರ ತಮ್ಮ ದತ್ತು ಪುತ್ರನಾದ ಪ.ರಾ. ಶ್ರೀನಿವಾಸ ಅವರಿಗೆ ನೀಡಿದರು. ಇದೇ ಸ್ಥಳದಲ್ಲಿ ಹಿಂದೆ ತಿಳಿಸಿದಂತೆ ತಮ್ಮ ಕುಲ ಸ್ವಾಮಿಯಾದ ಶ್ರೀನಿವಾಸ ದೇವರನ್ನು, ಮುಖ್ಯಪ್ರಾಣ ದೇವರನ್ನ ಹಾಗೂ ರಾಯರನ್ನು ಪ್ರತಿಷ್ಠಾಪಿಸಲು ಭವ್ಯವಾದ ಕಟ್ಟಡವನ್ನು ಕಟ್ಟಿಸಿ ನಮ್ಮೆಲ್ಲರಿಗೂ ಮಹದುಪಕಾರವನ್ನು ಮಾಡಿದ್ದಾರೆ.
ಪಲ್ಲಕ್ಕಿ ಪ್ರತಿಷ್ಠಾನ ಟ್ರಸ್ಟ್ ನ ಸರ್ವ ಸದಸ್ಯರ ಹಾಗೂ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪಲ್ಲಕ್ಕಿ ಸುಧೀಂದ್ರಚಾರ್ ಹಾಗೂ ಶ್ರೀಮತಿ ವೀಣಾ ದಂಪತಿಗಳ ಪುತ್ರನಾದ ಪಲ್ಲಕ್ಕಿ ಅಭಿಷೇಕಾಚಾರ್ ಇವರು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ, ಪದ್ಮವಿಭೂಷಣ, ಯತಿಕುಲ ಚಕ್ರವರ್ತಿಗಳಾದ ಪೇಜಾವರ ಮಠಾಧೀಶರಾದ ಶ್ರೀ 1008 ಶ್ರೀ ವಿಶ್ವೇಶ್ವರತೀರ್ಥ ಶ್ರೀ ಪಾದಂಗಳವರ ಪ್ರೀತಿ ಪಾತ್ರ ಶಿಷ್ಯನಾಗಿ ಮುಂದೆ 2022 ಹುಬ್ಬಳ್ಳಿಯಲ್ಲಿ, ವೈಭವದಿಂದ ಸುಧಾ ಮಂಗಳವನ್ನು ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥರು ಶ್ರೀ ಪಾದಂಗಳವರಿಂದ ಶ್ರೀಮಾನ್ ನ್ಯಾಯ ಸುಧಾಮಂಗಳವನ್ನು ಮುಗಿಸಿಕೊಂಡು ಎಲ್ಲರ ಪ್ರೀತಿ ಪಾತ್ರರಾಗಿರುವ ಪಂ. ಅಭಿಷೇಕಚಾರ್ಯರು ಕಳೆದ ಕೆಲವು ವರ್ಷಗಳಿಂದ ಮಠದ ಪೂಜೆ, ಉತ್ಸವ ಹಾಗೂ ರಾಯರ ಆರಾಧನೆಯನ್ನು ಶಿವಮೊಗ್ಗದ ಎಲ್ಲಾ ಅನೇಕ ಹಿರಿಯರ, ವಿದ್ವಾಂಸರ ಹಾಗೂ ಪಲ್ಲಕ್ಕಿ ಪರಿವಾರದವರ ಸಹಕಾರದೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಿದ್ದಾರೆ.ತಮ್ಮ ದೊಡ್ಡಪ್ಪನವರಾದ ಪ.ರಾ. ಶ್ರೀನಿವಾಸ್ ಅವರ ಸಂಕಲ್ಪವನ್ನು ಸಾಕಾರಗೊಳಿಸಲು ಪಂ. ಅಭಿಷೇಕಚಾರ್ಯರು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಈ ಪಲ್ಲಕ್ಕಿ ಮಠಕ್ಕೆ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥರು, ಶ್ರೀ ವಿಶ್ವಪ್ರಸನ್ನ ತೀರ್ಥರು ಸಂಸ್ಥಾನ ಪೂಜೆಯನ್ನು ಮಾಡಿ ಅನುಗ್ರಹವನ್ನು ಮಾಡಿದ್ದಾರೆ.
ಅದರಂತೆ ಮಂತ್ರಾಲಯದ ಶ್ರೀ 1008 ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಆಗಮಿಸಿ ನಮ್ಮೆಲ್ಲರಿಗೂ ಅನುಗ್ರಹಿಸಿದ್ದಾರೆ.
ಪಲ್ಲಕ್ಕಿ ಮಠವು ದೇವ ಪಿತೃ ಕಾರ್ಯಗಳಿಗೆ ಸದಾ ಸರ್ವರಿಗೂ ಉಪಯುಕ್ತವಾಗಿದೆ ಮತ್ತು ಯೋಗ್ಯವಾದ ಸಾಧಕರಿಗೆ, ಪಾಠ ಪ್ರವಚನಕ್ಕೆ ಸ್ಥಾನವಾಗಿದೆ ಎಂದು ಸಾವಿರಾರು ಜನರು ಅಭಿಪ್ರಾಯ ಪಟ್ಟಿದ್ದಾರೆ.